ಕೋಳಿ ತಾಳ್( ಇಂಗ್ಲೀಷ್ ನಲ್ಲಿ ' ಚಿಕನ್ ಕರಿ ' ) ಅಭಿಲಾಷ್ ಶೆಟ್ಟಿ ಬರೆದು ನಿರ್ದೇಶಿಸಿದ ಭಾರತೀಯ ಕನ್ನಡ ವಿಡಂಬನಾತ್ಮಕ ಚಲನಚಿತ್ರವಾಗಿದೆ. ಇ ದು ತನ್ನ ಮೊಮ್ಮಗ ಪಟ್ಟಣಕ್ಕೆ ಹೊರಡುವ ಮೊದಲು ಕಾಣೆಯಾದ ಹುಂಜವನ್ನು ಹುಡುಕಿ ಕೋಳಿ ತಾಳ್ ಮಾಡಿ ಬಡಿಸಲು ಅಜ್ಜ ಮಾಡುವ ಸಾಹಸದ ಕುರಿತಾಗಿದೆ. ಈ ಚಲನಚಿತ್ರವು 21 ನೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ನಂತರ ಇದನ್ನು ಸ್ಟಟ್‌ಗಾರ್ಟ್‌ನ 18 ನೇ ಭಾರತೀಯ ಚಲನಚಿತ್ರೋತ್ಸವ ಮತ್ತು ಮೆಲ್ಬೋರ್ನ್‌ನ 12 ನೇ ಭಾರತೀಯ ಚಲನಚಿತ್ರೋತ್ಸವ ಸೇರಿದಂತೆ ವಿವಿಧ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತು. ಮತ್ತು ಇದು ಜಿಯೊ - ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ 22 ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ಭಾರತೀಯ ಪ್ರಥಮ ಪ್ರದರ್ಶನವನ್ನು ಕಂಡಿತು. == ಸಾರಾಂಶ == ಮೊಮ್ಮಗನ ಭೇಟಿಯಿಂದ ಉತ್ಸುಕರಾದ ವೃದ್ಧ ದಂಪತಿಗಳು ರಾತ್ರಿಯ ಊಟಕ್ಕೆ ಚಿಕನ್ ಕರಿ ಬೇಯಿಸಲು ಯೋಜಿಸಿದ್ದಾರೆ. ಆದರೆ, ಕೋಳಿ ನಾಪತ್ತೆಯಾದಾಗ ಪರಿಸ್ಥಿತಿ ಹದಗೆಡುತ್ತದೆ. ಆದ್ದರಿಂದ, ಅಜ್ಜ ತನ್ನ ಮೊಮ್ಮಗ ಪಟ್ಟಣಕ್ಕೆ ಹೊರಡುವ ಮೊದಲು ಹುಂಜವನ್ನು ಹುಡುಕಲು ಮತ್ತು ಚಿಕನ್ ಕರಿ ಮಾಡಿ ಬಡಿಸಲು ಸಾಹಸ ಮಾಡುತ್ತಾನೆ. == ಪಾತ್ರವರ್ಗ == ವನಜಾ ಪಾತ್ರದಲ್ಲಿ ರಾಧಾ ರಾಮಚಂದ್ರ ಮಹಾಬಲ ಶೆಟ್ಟಿಯಾಗಿ ಪ್ರಭಾಕರ ಕುಂದರ್ ಮಂಜನಾಗಿ ಗಣೇಶ ಮೊಗವೀರ ಸತೀಶನಾಗಿ ಶರತ್ ದೇವಾಡಿಗ ಹಾಲ ಪಾತ್ರದಲ್ಲಿ ಗುರುಪ್ರಸಾದ್ ನಾಯರಿ ಸುಮಂತ್ ಪಾತ್ರದಲ್ಲಿ ಅಭಿಲಾಷ್ ಶೆಟ್ಟಿ == ವಿಮರ್ಶೆಗಳು == ಸಿನೆಸ್ತಾನ್ ಚಿತ್ರಕ್ಕೆ 4 ರಲ್ಲಿ 3 ನಕ್ಷತ್ರಗಳನ್ನು ನೀಡಿ "ಚಲನಚಿತ್ರದ ಚೌಕಟ್ಟು ಮತ್ತು ವಿಷಯಗಳು ತುಂಬಾ ನೈಜವಾಗಿವೆ, ಆದ್ದರಿಂದ ನೀವು ಅವುಗಳನ್ನು ಅನುಭವ ಮಾಡಬಹುದು" ಎಂದು ಹೇಳಿತು. ಟೈಮ್ಸ್ ಆಫ್ ಇಂಡಿಯಾವು 5 ರಲ್ಲಿ 3.5 ನಕ್ಷತ್ರಗಳನ್ನು ನೀಡಿ ಹೇಳಿತು- "ಒಂದು ಹೃದಯಸ್ಪರ್ಶಿ ಕಥೆಯು ಲಘು ಹೃದಯದ ಕ್ಷಣಗಳಿಂದ ತುಂಬಿದೆ" . ಡೆಕ್ಕನ್ ಹೆರಾಲ್ಡ್ 5 ರಲ್ಲಿ 3.5 ಎಂದು ರೇಟ್ ಮಾಡಿದೆ. ಡಲ್ಲಾಸ್ ಮೂವೀ ಸ್ಕ್ರೀನಿಂಗ್ಸ್ ಚಿತ್ರಕ್ಕೆ "-" ಗ್ರೇಡ್ ನೀಡಿತು ಮತ್ತು "ಚಿತ್ರವು ಅವರ ಕುಟುಂಬ ಜೀವನ ಮತ್ತು ಅವರ ಒಗ್ಗಿಕೊಂಡಿರುವ ಪೀಳಿಗೆಯ ಆಧಾರದ ಮೇಲೆ ಆಸಕ್ತಿದಾಯಕ ಪ್ರಾದೇಶಿಕ ಪದ್ಧತಿಗಳಿಂದ ಸಂಪೂರ್ಣವಾಗಿ ತುಂಬಿದೆ" ಎಂದು ಹೇಳಿದರು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == @ ಐ ಎಮ್ ಡಿ ಬಿ